- Hide blocks
ವಸಂತ ಬಂದ, ಋತುಗಳ ರಾಜ ತಾ ಬಂದ,
ಚಿಗುರನು ತಂದ, ಹೆಣಳ ಕುಣಿಸುತ ನಿಂದ,
ಚಳಿಯನು ಕೊಂದ ಹಕ್ಕಿಗಳುಲಿಗಳೆ ಚೆಂದ,
ಕೂವೂ, ಜಗ್ ಜಗ್, ಪುವೀ, ಟೂವಿಟ್ಟವೂ !
ಕುರಿ ನೆಗೆದಾಟ, ಕುರುಬರ ಕೊಳಲಿನೂದಾಟ,
ಇನಿಯರ ಬೇಟ, ಬನದಲಿ ಬೆಳದಿಂಗಳೂಟ,
ಹೊಸ ಹೊಸ ನೋಟ, ಹಕ್ಕಿಗೆ ನಲಿವಿನ ಪಾಟ,
ಕವೂ, ಜಗ್ ಜಗ್, ಪುಬ್ಬ, ಟೂವಿಟ್ಟವೂ!
ಮಾವಿನ ಸೋಂಪು, ಮಲ್ಲಿಗೆ ಬಯಲೆಲ್ಲ ಕೆಂಪು,
ಗಾಳಿಯ ತಂಪು, ಜನಗಳ ಜಾತ್ರೆಯ ಗುಂಪು,
ಕಿವಿಗಳಿಗಿಂಪು ಹಕ್ಕಿಗಳುಲುಹಿನ ಪೆಂಪು,
ಕೊವೂ, ಜಗ್ ಜಗ್, ಪುವೀ, ಟೂವಿಟ್ಟವೂ!
ಬಂದ ವಸಂತ - ನಮಾ
ರಾಜ ವಸಂತ!
-x-